About the Temple and History

About the Temple

ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ತುಮಕೂರು

Temple History

ಕಲಿಯುಗದ ದೈವ, ವಿಷ್ಣುವಿನ ಪವಿತ್ರ ಅವತಾರ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ವರಹ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಕಾರ ಮಾನವನ ಅವತಾರದಲ್ಲಿ ಜನಿಸಿ ವಿಷ್ಣು, ವೆಂಕಟೇಶ್ವರನಾಗಿ ಲಕ್ಷ್ಮಿಯನ್ನು ಹುಡುಕಿಕೊಂಡು ಹೊರಡುತ್ತಾನೆ ಅಂದು ಲಕ್ಷ್ಮಿಯನ್ನು ಹುಡುಕಿ ಹೊರಟ ವೆಂಕಟೇಶ್ವರನನ್ನೆ ನಾವಿಂದು ಪುಣ್ಯಕ್ಷೇತ್ರ ತಿರುಪತಿಯಲ್ಲಿ ಕಾಣಬಹುದು.

ಸಂಕಟ ಬಂದಾಗ ವೆಂಕಟರಮಣ ಎಂದು ಮಾತು ಜನ ಮಾನಸದಲ್ಲಿ ಸಾಮಾನ್ಯ. ಈ ಮಾತು ಅಕ್ಷರ ಸಹ ಸತ್ಯ, ಯಾಕಂದರೆ ಸಂಕಟ ಬಂದಾಗ ಈ ವೆಂಕಟರಮಣನ್ನು ನೆನೆದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ. ಭಕ್ತರ ಕಷ್ಟಗಳನ್ನು ಆಲಿಸಿ ಅದನ್ನು ನಿವಾರಿಸುತ್ತಾರೆ ಶ್ರೀ ವೆಂಕಟೇಶ್ವರ ಸ್ವಾಮಿ.

ಭಕ್ತರಲ್ಲಿ ಸುಖ, ಶಾಂತಿ, ಯಶಸ್ಸು, ಸಂಪತ್ತನ್ನು ಕರುಣಿಸಲು ಕಲಿಯುಗದ ದೈವನಾಗಿ ವೆಂಕಟೇಶ್ವರ, ಗೋವಿಂದ ಮತ್ತು ಬಾಲಾಜಿಯ ನಾಮಂಕಿತದಲ್ಲಿ ಧರೆಗಿಳಿದು ಬಂದು ವೆಂಕಟೇಶ್ವರ ಸ್ವಾಮಿ ಭಕ್ತರ ಜನ ಮಾನಸದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.

ಧ್ರುವ, ಕೌತುಕ, ಸಂಪನ್ನ, ಉತ್ಸವ ಮತ್ತು ಬಲಿ ಬೆರಮ್ ಎನ್ನುವಂತಹ ಐದು ದೇವತೆಗಳಲ್ಲಿ ವೆಂಕಟೇಶ್ವರನು ಪ್ರತಿನಿಧಿಸುತ್ತಾನೆ. ಓಂ ನಮೋ ವೆಂಕಟೇಶಾಯ, ಓಂ ನಮೋ ನಾರಾಯಣಾಯ ಮತ್ತು ಶ್ರೀ ವೆಂಕಟೇಶ್ವರ ಸುಪ್ರವತಂ ಎನ್ನುವಂತಹ ಮಂತ್ರಗಳನ್ನು ಪಠಿಸಿದರೆ ಕಷ್ಟ ಎನ್ನುವುದು ಹತ್ತಿರ ಬರುವುದಿಲ್ಲ ಎನ್ನುವುದು ವಾಡಿಕೆ.

ವೆಂಕಟೇಶ್ವರನನ್ನು ಕಲಿಯುಗ ದೈವ ಎಂದು ಕರೆದರೆ ಆತ ನೆಲೆಸಿರುವ ತಿರುಪತಿಯನ್ನು ಕಲಿಯುಗ ವೈಕುಂಠ ಎಂದು ಹೇಳಲಾಗುತ್ತದೆ. ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಸ್ವಾಮಿಯು ನೆಲೆಸಿದ್ದು, ಭಕ್ತ ಸಂಕುಲವನ್ನು ಸಕಲ ಕಷ್ಟಗಳಿಂದ ಪಾರು ಮಾಡುತ್ತಿದ್ದಾರೆ.

ತಿರುಮಲ ವೆಂಕಟೇಶ್ವರ ದೇವಸ್ಥಾನ ಸಾರ್ವಜನಿಕರ ಅಪಾರ ಕೊಡುಗೆ ಮತ್ತು ದೇಣಿಗೆ ಪಡೆಯುವ ಭೂಮಿಯ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ಈ ವೆಂಕಟೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ ಯಾಕಂದ್ರೆ ಆ ಸ್ಥಳದ ಮಹಿಮೆ ಅಂತಹದು.

ಶ್ರೀ ವೆಂಕಟೇಶ್ವರ ಸ್ವಾಮಿಯ ಅನೇಕ ದೇವಾಲಯಗಳು ದೇಶದ ನಾನಾ ಭಾಗದಲ್ಲಿ, ರಾಜ್ಯದ ಹಲವಾರು ಪ್ರದೇಶಗಳಲ್ಲಿ ನೆಲೆಗೊಂಡಿವೆ. ಆದರೆ ತುಮಕೂರಿನಲ್ಲಿರುವಂತಹ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಅದೆಲ್ಲವುಗಳಿಗಿಂತ ವಿಭಿನ್ನವಾಗಿದ್ದು, ವಿಶಿಷ್ಟ ಆಚರಣೆಗಳಿಂದ ಭಕ್ತರ ಮೊರೆಯ ಪೊರೆಯೊ ವೆಂಕಟೇಶ್ವರನ ಸನ್ನಿಧಿಯಾಗಿ ಗುರುತಿಸಿಕೊಂಡಿದೆ.

ಇಷ್ಟಾರ್ಥ ಸಿದ್ದಿಯನ್ನು ನೆರವೇರಿಸುತ್ತಾ ಶ್ರೀ ವೆಂಕಟೇಶ್ವರ ಸ್ವಾಮಿಯು ತುಮಕೂರಿನ ತನ್ನ ಭಕ್ತರ ಕಷ್ಟಗಳನ್ನ ತೀರಿಸುತ್ತಾ ಸುಖ ಶಾಂತಿ ನೆಮ್ಮದಿಯನ್ನು ನೀಡುತ್ತಾ ಬರುತ್ತಿದ್ದಾರೆ. ಶ್ರೀ ಸ್ವಾಮಿ ವೆಂಕಟೇಶ್ವರ ಇಲ್ಲಿರುವಂತಹ ದೇವಾಲಯ ಮತ್ತು ಪೂಜಾ ವಿಧಿ ವಿಧಾನ ನೋಡಲು ಎರಡು ಕಣ್ಣುಗಳು ಸಾಲದು.

ತುಮಕೂರಿನ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯದ ಇತಿಹಾಸ

ತುಮಕೂರಿನ ರಿಂಗ್ ರಸ್ತೆಯಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ ಸಾಮಾನ್ಯ ದೇವಾಲಯವಲ್ಲ 1987 ರಲ್ಲಿ ತಿರುಪತಿ ತಿರುಮಲದಿಂದ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಅಮ್ಮನವರು ಹಾಗೂ ಜಯ, ವಿಜಯ ಈ ನಾಲ್ಕು ಶಿಲಾ ಮೂರ್ತಿಗಳನ್ನು ಕೊಡುಗೆಯಾಗಿ ಪಡೆದುಕೊಂಡು ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 100×235 ಅಡಿಗಳಲ್ಲಿ ದೇವಾಲಯದ ಆವರಣವಿದ್ದು, ದೇವಾಲಯವು 100×135 ಅಡಿಗಳಲ್ಲಿ ನಿರ್ಮಾಣವಾಗಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಪಕ್ಕದಲ್ಲಿ ಶ್ರೀ ಪದ್ಮಾವತಿ ದೇವಾಲಯ, ಪ್ರಾರ್ಥನಾ ಮಂದಿರದಲ್ಲಿ ಗಣಪತಿ ಮೂರ್ತಿ ಮತ್ತು ಜಯ ವಿಜಯರ ಮೂರ್ತಿಗಳು, ಶ್ರೀ ಗರುಡನಾಥ ಸ್ವಾಮಿಯವರು ದೇವಾಲಯವನ್ನು ಕೂಡ ಚಿಕ್ಕದಾಗಿ ನಿರ್ಮಾಣ ಮಾಡಲಾಗಿದೆ.

ವಸಂತ ಮಂಟಪದ ಮುಂಭಾಗದಲ್ಲಿ ರಾಜಗೋಪುರವಿದ್ದು, ಇದು ಸುಮಾರು 45 ಅಡಿ ಎತ್ತರವಿದೆ. ಇದರಲ್ಲಿ 38 ಮೂರ್ತಿಗಳ ಬಿಂಬವನ್ನು ಸ್ಥಾಪನೆ ಮಾಡಲಾಗಿದೆ. ರಾಜ ಗೋಪುರದ ಮುಂಭಾಗದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಮುಂಭಾಗದಲ್ಲಿ ಗರುಡಗಂಬ ನಿರ್ಮಾಣ ಮಾಡಲಾಗಿದ್ದು, ಇದರ ಪೂರ್ವಕ್ಕೆ ಕೂಡ ಒಂದು ದ್ವಾರವನ್ನು ಮಾಡಲಾಗಿದೆ.

ಇದರ ದಕ್ಷಿಣ ಭಾಗದಲ್ಲಿ ಅಮರನಾರಾಯಣ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಶ್ರೀ ಸ್ವಾಮಿ ಕೈವಾರ ತಾತಯ್ಯನವರ ಬಿಂಬವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇವರು ತ್ರಿಕಾಲ ಜ್ಞಾನಿಗಳಾಗಳಾಗಿದ್ದಾರೆ. ಇವರ ಕೃಪಾಶೀರ್ವಾದದಿಂದ ದೇವಾಲಯವನ್ನು ಮುನ್ನಡೆಸುತ್ತಾ ಬರಲಾಗುತ್ತಿದೆ ಎನ್ನುತ್ತಾರೆ ದೇವಾಲಯದ ಧರ್ಮಾಧಿಕಾರಿ ವೆಂಕಟೇಶ್ ರವರು.

post

ಸುಮಾರು 40 ವರ್ಷಗಳ ಶ್ರಮದಿಂದಾಗಿ ದೇವಾಲಯ ಅದ್ಬುತವಾಗಿ ನಿರ್ಮಾಣವಾಗಿ ನಡೆದುಕೊಂಡು ಬರುತ್ತಿದೆ. ಭಕ್ತಾದಿಗಳು ತನು, ಮನ, ಧನ ಅರ್ಪಿಸುವುದರ ಮೂಲಕ ದೇಗುಲಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಇನ್ನೂ ಶ್ರೀ ವೆಂಕಟೇಶ್ವರ ಸ್ವಾಮಿಯ ಆಧಾರಪೀಠವನ್ನು ಇದೀಗ ಸ್ಥಾಪನೆ ಮಾಡಲಾಗಿದ್ದು, ಹೀಗಾಗಿ ಪುನಃ ಪ್ರತಿಷ್ಠಾಪನೆಯನ್ನು ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಮಾನ ಗೋಪುರದ ನವೀನ ಅನುಕರಣೆಯನ್ನು ಮಾಡಲಾಗಿದೆ. ಅದಕ್ಕೆ ಕಳಸ ಕುಂಭಾಭಿಷೇಕವನ್ನು ಮಾಡಲಾಗುತ್ತಿದೆ ಇದು ವಿಶೇಷ ಕಾರ್ಯಕ್ರಮವಾಗಿದೆ.

ಶ್ರೀ ವೆಂಕಟೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದ್ದು, ಮಹಾ ಮಂಗಳಾರತಿ ಪೂರ್ಣ ಹೋಮ, 108 ಕಳಸಗಳ ಕುಂಭಾಭಿಷೇಕಕ್ಕೆ ಸ್ಥಾಪನೆ ಮಾಡಲಾಗಿದೆ.

ಈ ದೇವಾಲಯ ವಿಶೇಷ ಶಕ್ತಿಯನ್ನು ಹೊಂದಿದ್ದು ತುಮಕೂರಿನ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ತಮ್ಮ ತನು ಮನ ಧನ ಅರ್ಪಣೆ ಮಾಡಬೇಕು. ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು.

post
post
ತಿರುಮಲ ತಿರುಪತಿ ವೆಂಕಟೇಶ್ವರ ದೇಗುದಲ್ಲಿನ ವಿಶೇಷ ಪೂಜೆಗಳು

ಬೆಳಗ್ಗೆ 8:00 ರಿಂದ 11:30, ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿನಿತ್ಯ ಪೂಜಾ ವಿಧಿ ವಿಧಾನಗಳು ದೇವಾಲಯದಲ್ಲಿ ನಡೆಯುತ್ತವೆ. ಈ ದೇವಾಲಯಕ್ಕೆ ಹೊರ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.

ಪ್ರತಿ ಶನಿವಾರ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ, ತಿಂಗಳ 2 ನೆಯ ಭಾನುವಾರ ಕಲ್ಯಾಣೋತ್ಸವವನ್ನು ನಡೆಸಲಾಗುತ್ತಿದ್ದು, ಇದು ಸಾಮೂಹಿಕ ಕಲ್ಯಾಣೋತ್ಸವವಾಗಿರುತ್ತದೆ. ವಿಶೇಷವಾಗಿ ಯಾರು ಬೇಕಾದರೂ ಕಲ್ಯಾಣೋತ್ಸವವನ್ನು ಮಾಡಿಸಬಹುದಾಗಿದೆ. ತಿಂಗಳ ಹುಣ್ಣಿಮೆಯ ನಂತರ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತಿದ್ದು, ಅದು ತಿಂಗಳ ಮೂರನೇ ಭಾನುವಾರದಂದು ನಡೆಯುತ್ತದೆ. ಇದೆಲ್ಲವು ಪ್ರತಿ ತಿಂಗಳು ನಡೆಯುವಂತಹ ಕಾರ್ಯಕ್ರಮಗಳಾಗಿದ್ದು, ಇದನ್ನು ಹೊರತುಪಡಿಸಿ ವಿಶೇಷ ದಿನಗಳಲ್ಲಿ ಸಂಜೆ 6 ಗಂಟೆಯ ನಂತರ ದೀಪಾಲಂಕಾರ ನಡೆಸಲಾಗುತ್ತಿದೆ.

ಈ ದೇವಾಲಯದ ವಿಶೇಷತೆ ಎಂದರೆ ಮೂರ್ತಿಗಳು ತಿರುಪತಿ ತಿರುಮಲ ದೇವಾಲಯದಿಂದ ನೀಡಿದಂತಹ ಮೂರ್ತಿಗಳಾಗಿವೆ. ಇನ್ನೂ ರಥಸಪ್ತಮಿ ಆದ ನಂತರ 15 ದಿನದಲ್ಲಿ ಕೃಷ್ಣ ಸಪ್ತಮಿ ಬರುತ್ತದೆ. ಆ ದಿನದಲ್ಲಿ ಸೂರ್ಯ ರಶ್ಮಿ ಶ್ರೀ ವೆಂಕಟೇಶ್ವರ ಸ್ವಾಮಿಯ ನಾಭಿಯವರೆಗೂ ಬರುತ್ತದೆ. ಅಮ್ಮನವರಿಗೆ ಸೂರ್ಯ ರಶ್ಮಿ ಪೂರ್ಣವಾಗಿ ಹರಿಯುತ್ತದೆ. ಎಂಟು ದಿನಗಳು ಈ ವಿಶೇಷ ದೇವಾಲಯದಲ್ಲಿ ಇದು ನಡೆಯಲಿದ್ದು ಅದನ್ನು ನೋಡುವುದೇ ಒಂದು ಸೊಗಸು.

108 ಕುಂಬ ಅಭಿಷೇಕದ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಮಹಾಗಣಪತಿ ಪೂಜೆ, ಪುಣ್ಯಹ, ಅಂಕುರಾರ್ಪಣೆ, ಮತ್ತು ವಿಶೇಷವಾಗಿ ದೇವನಂದಿ ಧ್ವಜಸ್ಥಂಭದ ಸ್ಥಾಪನೆ, ಕಳಶ ಸ್ಥಾಪನೆ, ಯಂತ್ರರಾಧನೆ, ಕನ್ಯಾ ಲಗ್ನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪುನಹ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಅರ್ಚಕರು ಹೇಳುತ್ತಾರೆ.

ವಿಶೇಷವಾಗಿರುವಂತಹ ಮೃತ್ಯುಹೋಮ ಸೇರಿದಂತೆ ಹಲವಾರು ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗಿದೆ. ಭಕ್ತಾದಿಗಳು ಆಗಮಿಸಿ ಇಂತಹ ಪೂಜೆಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ವಿದ್ಯಾರ್ಥಿಗಳಿಗೆ ವಿದ್ಯೆ, ಧನ ಲಾಭ, ಧಾನ್ಯ ಲಾಭ ವಿಶೇಷವಾದ ಶಕ್ತಿ ನೀಡುವಂತಹ ಸ್ವಾಮಿ ಇವರ ಆಗಿದ್ದು ಈ ಒಂದು ಪ್ರದೇಶ ಅತ್ಯಂತ ಪುಣ್ಯ ಕ್ಷೇತ್ರವಾಗಿದೆ.

ಗಣಪತಿ ಹೋಮ, ನವಗ್ರಹ ಹೋಮ ಮತ್ತು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಹೋಮ ಮಹಾಪೂರ್ಣಾಹುತಿ ಹೋಮ ಮಹಾ ಕುಂಭಾಭಿಷೇಕ ವಿಮಾನ ಗೋಪುರಕ್ಕೆ ಅಭಿಷೇಕ ನಡೆಸಲಾಗುತ್ತದೆ. ತಾವೆಲ್ಲರೂ ತನು, ಮನ, ಧನ ಅರ್ಪಣೆ ಮಾಡುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಈ ದೇವಾಲಯದ ಅಭಿವೃದ್ಧಿ ಒಬ್ಬರ ಕೈಯಿಂದ ಮಾತ್ರ ಸಾಧ್ಯವಿಲ್ಲ, ತಾವೆಲ್ಲರೂ ಕೂಡ ಇವರ ಜೊತೆ, ಕೈಜೋಡಿಸಿದರೆ ಅತ್ಯುತ್ತಮವಾಗಿ ದೇವಾಲಯವನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಸ್ವಲ್ಪ ಸ್ವಲ್ಪ ಸೇರಿಸಿದರೆ ದೊಡ್ಡ ಮೊತ್ತವಾಗಿ ಇನ್ನು ಸಾಕಷ್ಟು ಅಭಿವೃದ್ದಿ ಮಾಡಬಹುದು.

ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಕ್ತರ ಕಷ್ಟಗಳನ್ನು ಪರಿಹರಿಸುವ ಪುಣ್ಯ ಕ್ಷೇತ್ರ, ಮನಸ್ಸಿಗೆ ನಮ್ಮೆದಿಯನ್ನು ಕೊಡುವ ದೈವೀ ಕ್ಷೇತ್ರ, ಒಮ್ಮೆ ನೀವು ಈ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿ.